ಸ್ವಾತಂತ್ರ್ಯದ ಅಮೃತ ಮಹೋತ್ಸವವು ಭಾರತದ ಸ್ವಾತಂತ್ರ್ಯದ 75 ವರ್ಷಗಳ ಉತ್ಸವಾಚರಣೆ ಹಾಗೂ ಸ್ಮರಣಾರ್ಥವಾಗಿ ಮತ್ತು ಈ ದೇಶದ ಜನರ, ಸಂಸ್ಕೃತಿಯ ಮತ್ತು ಸಾಧನೆಗಳ ನೆನಪಿಗಾಗಿ ಭಾರತ ಸರಕಾರವು ಆರಂಭಿಸಿದ ಕಾರ್ಯಕ್ರಮವಾಗಿದೆ.
ಇನ್ನಷ್ಟು ಓದಿ
ಭಾರತ ದೇಶವನ್ನು ಇಲ್ಲಿಯವರೆಗಿನ ವಿಕಾಸದ ಪಥದಲ್ಲಿ ಮುನ್ನಡೆಸಲು ಕಾರಣಕರ್ತರಾದ ಭಾರತದ ಜನರಿಗೆ ಈ ಮಹೋತ್ಸವವು ಸಮರ್ಪಿತವಾಗಿರುವುದಲ್ಲದೆ ಆತ್ಮನಿರ್ಭರ ಭಾರತದ ಭಾವನೆಗೆ ಪುಷ್ಟಿಕೊಟ್ಟು ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಭಾರತ 2.0 ದರ್ಶನವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವಲ್ಲಿ ಅವರಲ್ಲಿರುವ ಶಕ್ತಿ ಮತ್ತು ಸಾಮರ್ಥ್ಯಗಳೂ ಅಡಕವಾಗಿವೆ.
ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ಸಂಬಂಧದಲ್ಲಿ 75 ವಾರಗಳ ಹಿಂದೆಯೇ ಅಂದರೆ 12ನೇ ಮಾರ್ಚ್ 2021ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಶುಭಾರಂಭವಾಯಿತು. 15ನೇ ಆಗಸ್ಟ್ 2022ರಂದು ಮುಕ್ತಾಯವಾಗುತ್ತದೆ. ಈ ಕೆಳಗಿನ ಐದು ವಿಷಯಗಳು ಅಮೃತ ಮಹೋತ್ಸವದ ಮುಖ್ಯ ವಸ್ತುಗಳಾಗಿರುತ್ತವೆ.