-->

ಯಾವುದರ ಬಗ್ಗೆ | ಸ್ವಾತಂತ್ರ್ಯದ ಅಮೃತ ಮಹೋತ್ಸವ | ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ.

ಯಾವುದರ ಬಗ್ಗೆ

ಸ್ವಾತಂತ್ರ್ಯದ ಅಮೃತ ಮಹೋತ್ಸವವು ಭಾರತದ ಸ್ವಾತಂತ್ರ್ಯದ 75 ವರ್ಷಗಳ ಉತ್ಸವಾಚರಣೆ ಹಾಗೂ ಸ್ಮರಣಾರ್ಥವಾಗಿ ಮತ್ತು ಈ ದೇಶದ ಜನರ, ಸಂಸ್ಕೃತಿಯ ಮತ್ತು ಸಾಧನೆಗಳ ನೆನಪಿಗಾಗಿ ಭಾರತ ಸರಕಾರವು ಆರಂಭಿಸಿದ ಕಾರ್ಯಕ್ರಮವಾಗಿದೆ.

ಭಾರತ ದೇಶವನ್ನು ಇಲ್ಲಿಯವರೆಗಿನ ವಿಕಾಸದ ಪಥದಲ್ಲಿ ಮುನ್ನಡೆಸಲು ಕಾರಣಕರ್ತರಾದ ಭಾರತದ ಜನರಿಗೆ ಈ ಮಹೋತ್ಸವವು ಸಮರ್ಪಿತವಾಗಿರುವುದಲ್ಲದೆ ಆತ್ಮನಿರ್ಭರ ಭಾರತದ ಭಾವನೆಗೆ ಪುಷ್ಟಿಕೊಟ್ಟು ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಭಾರತ 2.0 ದರ್ಶನವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವಲ್ಲಿ ಅವರಲ್ಲಿರುವ ಶಕ್ತಿ ಮತ್ತು ಸಾಮರ್ಥ್ಯಗಳೂ ಅಡಕವಾಗಿವೆ.

ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ಸಂಬಂಧದಲ್ಲಿ 75 ವಾರಗಳ ಹಿಂದೆಯೇ ಅಂದರೆ 12ನೇ ಮಾರ್ಚ್‌ 2021ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಶುಭಾರಂಭವಾಯಿತು. 15ನೇ ಆಗಸ್ಟ್‌ 2022ರಂದು ಮುಕ್ತಾಯವಾಗುತ್ತದೆ. ಈ ಕೆಳಗಿನ ಐದು ವಿಷಯಗಳು ಅಮೃತ ಮಹೋತ್ಸವದ ಮುಖ್ಯ ವಸ್ತುಗಳಾಗಿರುತ್ತವೆ.

ಉದ್ಘಾಟನಾ ಕಾಯಕ್ರಮ

ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ

ಆಜಾದಿ ಅಮೃತ ಮಹೋತ್ಸವವು ಸ್ವಾತಂತ್ರ್ಯ ಚೈತನ್ಯದ ಅಮೃತವಾಗಿದೆ; ಸ್ವಾತಂತ್ರ್ಯ ಹೋರಾಟದ ಸೇನಾನಿಗಳ ಸ್ಫೂರ್ತಿದಾಯಕ ದಿವ್ಯೌಷಧವಾಗಿದೆ; ನವನವೀನ ವಿಚಾರಗಳ ಮತ್ತು ಪ್ರತಿಜ್ಞೆಗಳ ದಿವ್ಯಚಿಲುಮೆಯಾಗಿದೆ ಮತ್ತು ಆತ್ಮನಿರ್ಭರತದ ದಿವ್ಯ ನೆಲೆಯಾಗಿದೆ. ಆದ್ದರಿಂದ, ಈ ಮಹೋತ್ಸವವು ರಾಷ್ಟ್ರದ ಪುನಶ್ಚೇತನದ ಉತ್ಸವವಾಗಿದೆ; ಉತ್ತಮ ಆಡಳಿತದ ಕನಸನ್ನು ನನಸಾಗಿಸುವ ಹಬ್ಬವಾಗಿದೆ ಮತ್ತು ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಯ ಉತ್ಸವವಾಗಿದೆ.

ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ

ನರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿ.

ಉದ್ಘಾಟನಾ ಕಾರ್ಯಕ್ರಮ

ಆಜಾದಿ ಕ ಅಮೃತ್ ಮಹೋತ್ಸವ: ಭಾರತ ಸ್ವಾತಂತ್ರದ 75 ವರ್ಷಗಳ ಉತ್ಸವ ಆಚರಣೆ.

ಭಾರತದ ಸ್ವಾತಂತ್ರದ 75ನೇ ವಾರ್ಷಿಕೋತ್ಸವವನ್ನು ಆಚರಿಸಲು ಭಾರತ ಸರಕಾರದಿಂದ ಆಜಾದಿ ಕ ಅಮೃತ್ ಮಹೋತ್ಸವ ಎಂಬ ಸರಣಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಮಹೋತ್ಸವವನ್ನು ಜನ ಭಾಗೀದಾರಿಯ ಉತ್ಸಾಹದಲ್ಲಿ ಜನ ಉತ್ಸವವಾಗಿ ಆಚರಿಸಲಾಗುತ್ತಿದೆ.

15ನೇ ಆಗಸ್ಟ್‌ 2023ರ ಕಡೆಗೆ ನಾವು ಗಣನೆ ಮಾಡುವಾಗ ಆಜಾದಿ ಕಾ ಅಮೃತ್‌ ಮಹೋತ್ಸವವು ಈ ಜನತಾ ಆಂದೋಲನವು ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಪ್ರಮುಖ ಅಂಶಗಳ ಮೇಲೆ ಕೇಂದ್ರಿಕರಿಸಲು ಇನ್ನಷ್ಟು ಒತ್ತು ಕೊಡಬಯಸುತ್ತದೆ. ಇದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಯವರು ಘೋಷಿಸಿರುವ ʻಪಂಚಪ್ರಾಣʼದ ಹಾದಿಯಲ್ಲಿ ಹೊಸ ವಿಷಯಗಳನ್ನು ಗುರುತಿಸಲಾಗಿದೆ: ಮಹಿಳೆ ಮತ್ತು ಮಕ್ಕಳು, ಆದಿವಾಸಿ ಬಲಪಡಿಸುವಿಕೆ, ನೀರು, ಸಾಂಸ್ಕೃತಿಕ ಹೆಮ್ಮೆ, ಪರಿಸರಕ್ಕಾಗಿ ಜೀವನ ಶೈಲಿ, ಆರೋಗ್ಯ ಮತ್ತು ಸುಖೀಭಾವ, ಒಳಗೊಳ್ಳುವಿಕೆಯ ಅಭಿವೃದ್ಧಿ, ಆತ್ಮ ನಿರ್ಭರ ಭಾರತ ಮತ್ತು ಒಗ್ಗಟ್ಟು.

Top