15ನೇ ಆಗಸ್ಟ್ 2023ರ ಕಡೆಗೆ ನಾವು ಗಣನೆ ಮಾಡುವಾಗ ಆಜಾದಿ ಕಾ ಅಮೃತ್ ಮಹೋತ್ಸವವು ಈ ಜನತಾ ಆಂದೋಲನವು ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಪ್ರಮುಖ ಅಂಶಗಳ ಮೇಲೆ ಕೇಂದ್ರಿಕರಿಸಲು ಇನ್ನಷ್ಟು ಒತ್ತು ಕೊಡಬಯಸುತ್ತದೆ.
ಇದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಯವರು ಘೋಷಿಸಿರುವ ʻಪಂಚಪ್ರಾಣʼದ ಹಾದಿಯಲ್ಲಿ ಹೊಸ ವಿಷಯಗಳನ್ನು ಗುರುತಿಸಲಾಗಿದೆ: ಮಹಿಳೆ ಮತ್ತು ಮಕ್ಕಳು, ಆದಿವಾಸಿ ಬಲಪಡಿಸುವಿಕೆ, ನೀರು, ಸಾಂಸ್ಕೃತಿಕ ಹೆಮ್ಮೆ, ಪರಿಸರಕ್ಕಾಗಿ ಜೀವನ ಶೈಲಿ, ಆರೋಗ್ಯ ಮತ್ತು ಸುಖೀಭಾವ, ಒಳಗೊಳ್ಳುವಿಕೆಯ ಅಭಿವೃದ್ಧಿ, ಆತ್ಮ ನಿರ್ಭರ ಭಾರತ ಮತ್ತು ಒಗ್ಗಟ್ಟು.
ಮಹಿಳೆ ಮತ್ತು ಮಕ್ಕಳು
ಯಾವುದೇ ದೇಶಕ್ಕಾಗಲೀ ಮಕ್ಕಳ ಅಭಿವೃದ್ಧಿಗಾಗಿ ಬಂಡವಾಳ ಹೂಡುವುದು ಆ ರಾಷ್ಟ್ರದ ಭವಿಷ್ಯದ ಒಳಿತಿಗಾಗಿ ಮಾಡುವ ಬಹುಮುಖ್ಯ ಕೆಲಸ. ಮಕ್ಕಳಿಗೆ ನೀಡುವ ಶಿಕ್ಷಣ, ಮೌಲ್ಯಗಳು ಮತ್ತು ಆರೋಗ್ಯವು ನೇರವಾಗಿ ದೇಶಗಳ ಸಾಮಾಜಿಕ ಹಾಗೂ ಆರ್ಥಿಕ ಸೂಚಕಗಳಾಗುತ್ತವೆ ಮತ್ತು ಅವುಗಳ ಜಾಗತಿಕ ನೆಲೆಯುನ್ನು ರೂಪಿಸುತ್ತವೆ. ಹಾಗಾಗಿ, ಮಕ್ಕಳಿಗೆ ನಾಗರೀಕ, ಸಾಮಾಜಿಕ ಮತ್ತು ನೈತಿಕಲ ಶಿಕ್ಷಣ ದೊರಕುವುದು ಅತ್ಯಂತ ಮುಖ್ಯ ಸಂಗತಿಯಾಗುತ್ತದೆ. ಹಾಗೆಯೇ ಆರೋಗ್ಯ ರಕ್ಷಣಾ ಸೇವೆಗಳು ಮತ್ತು ಇತ್ತೀಚಿನ ಹಲವಾರು ಕ್ಷೇತ್ರಗಳ (ವೈಜ್ಞಾನಿಕ, ತಾಂತ್ರಿಕ, ಸಾಂಸ್ಕೃತಿಕ, ಕಲಾ, ಶೈಕ್ಷಣಿಕ ಇತ್ಯಾದಿ) ಬೆಳವಣಿಗೆಗಳ ಪರಿಚಯ ಮಾಡಿಕೊಡುವುದೂ ಸಹ ಮುಖ್ಯವಾಗುತ್ತದೆ. ಭಾರತದಲ್ಲಿ ಮಕ್ಕಳ ರಕ್ಷಣೆಯ ವಿಷಯದಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆಯಾಗಿದ್ದರೂ ಸಹ ಆರೋಗ್ಯ ಸೇವೆಗಳು, ನೈರ್ಮಲ್ಯ, ಶಿಕ್ಷಣ ಇತ್ಯಾದಿಗಳಲ್ಲಿ ವಿಶೇಷವಾಗಿ ಗ್ರಾಮೀಣ ಮತ್ತು ಆದಿವಾಸಿ ಸಮುದಾಯಗಳ ಮಕ್ಕಳಿಗಾಗಿ ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದೆ.
ಇನ್ನಷ್ಟು ತಿಳಿಯಿರಿ
ಆದಿವಾಸಿ ಬಲಪಡಿಸುವಿಕೆ
ನಮ್ಮ ದೇಶದ ಸಮೃದ್ಧವಾದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವಲ್ಲಿ ದೇಶದಾದ್ಯಂತ ಇರುವ ಆದಿವಾಸಿ ಸಮುದಾಯಗಳು ಬಹುಮುಖ್ಯ ಪಾತ್ರವನ್ನು ನಿರ್ವಹಿಸಿವೆ. ಆಜಾದಿ ಕಾ ಅಮೃತ್ ಮಹೋತ್ಸವದಡಿಯಲ್ಲಿನ ಅನೇಕ ಆರಂಭಿಕೆಗಳಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ಎತ್ತಿ ತೋರಿಸಲಾಗಿದೆ.
2011ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನ ಸಂಖ್ಯೆಯ 8.6% ಭಾಗವಾಗಿ ಆದಿವಾಸಿಗಳು 104 ದಶಲಕ್ಷ ಜನರಿದ್ದಾರೆ. ಸ್ವಾತಂತ್ರ ಹೋರಾಟವಾಗಲಿ, ಕ್ರೀಡೆಯಾಗಲೀ ಅಥವಾ ವಾಣಿಜ್ಯವಾಗಲೀ ಆದಿವಾಸಿ ಸಮುದಾಯದವರು ಭಾರತದ ನಿರೂಪಣೆಗಳಲ್ಲಿ ಪ್ರಮುಖ ಪಾತವಹಿಸಿರುವುದನ್ನು ಸಿದ್ಧಪಡಿಸಲಾಗಿದೆ.
ಇನ್ನಷ್ಟು ತಿಳಿಯಿರಿ
ನೀರು
ನೀರು ಸುಸ್ಥಿರವಾದ ಜೀವದಾಯಕ ನೈಸರ್ಗಿಕ ಸಂಪನ್ಮೂಲವಾಗಿದೆ. ಆದರೆ ನೀರಿನ ಉಪಲಬ್ಧಿಯು ನಿಯಮಿತವಾಗಿದೆ ಮತ್ತು ಅದು ಎಲ್ಲಾ ಕಡೆಯೂ ಸಮನಾಗಿ ವಿತರಣೆಯಾಗಿಲ್ಲ. ನೀರಿಲ್ಲದಿದ್ದರೆ ಅನೇಕರು ಸಂಕಷ್ಟಕ್ಕೆ ಒಳಗಾಗುತ್ತಾರೆ.
ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ಸರಕಾರವು ಅನೇಕ ವಿನೂತನ ಕಾರ್ಯ ಆಂದೋಲನಗಳಾದ ಪ್ರತಿ ಹೊಲಕ್ಕೂ ನೀರು, ನದಿ ಉತ್ಸವ, ಅಮೃತ್ ಸರೋವರ್ ಇತ್ಯಾದಿಗಳನ್ನು ನೀರಿನ ಬಗೆಗಿನ ಸಂರಕ್ಷಣೆ ಮತ್ತು ಪುನರುಜ್ಜೀವನದ ಅರಿವು ಮೂಡಿಸಲು ಆರಂಭಿಸಿದೆ.
ಇನ್ನಷ್ಟು ತಿಳಿಯಿರಿ
ಪರಿಸರಕ್ಕಾಗಿ ಜೀವನಶೈಲಿ
UNFCCC COP26 (UN Climate Change Conference)ರಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು LiFE ನ್ನು (ಪರಿಸರಕ್ಕಾಗಿ ಜೀವನ ಶೈಲಿ) ಪರಿಚಯಿಸಿದರು. ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳನ್ನು ಪರಿಹರಿಸಲು ನಾಗರೀಕರನ್ನು ತೊಡಗಿಸಲು ಇದು ಆರಂಭವಾಗಿದೆ.
ಪ್ರಜ್ಞಾವಂತ ಮತ್ತು ಉದ್ದೇಶಪೂರ್ವಕವಾಗಿ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರ ಮೇಲೆ ನಮ್ಮ ಜೀವನ ಶೈಲಿಯನ್ನು ಈ ಆರಂಭಿಕೆಯು ಉತ್ತೇಜಿಸುತ್ತದೆ ಪ್ರಸಕ್ತದ ʻಉಪಯೋಗಿಸಿ ಬಿಸಾಡುʼ ಅಭ್ಯಾಸಗಳನ್ನು ಬದಲಿಸುವ ಗುರಿಯಿದೆ. ಇದರ ಹಿಂದಿನ ಉದ್ದೇಶವೇನೆಂದರೆ ಹವಾಮಾನ ಬದಲಾವಣೆಗಾಗಿ ದೈನಂದಿನ ಜೀವನದಲ್ಲಿ ಸರಳ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ನಾಗರೀಕರನ್ನು ಉತ್ತೇಜಿಸುವುದಾಗಿದೆ.
ಇನ್ನಷ್ಟು ತಿಳಿಯಿರಿ
ಆರೋಗ್ಯ ಮತ್ತು ಸುಖೀಭಾವ
ಆಸ್ಪತ್ರೆಗಳು, ವೈದ್ಯಕೀಯ ಸಾಧನಗಳು, ಚಿಕಿತ್ಸಾ ವಿಧಾನಗಳು, ಹೊರಗುತ್ತಿಗೆ, ದೂರ ತಪಾಸಣೆ, ವೈದ್ಯಕೀಯ ಪ್ರವಾಸೋದ್ಯಮ, ಆರೋಗ್ಯ ವಿಮೆ ಮತ್ತು ವೈದ್ಯಕೀಯ ಉಪಕರಣಗಳು ಆರೋಗ್ಯ ಕಾಳಜಿ ವಲಯದ ಭಾಗಗಳಾಗಿವೆ. ರೋಗ ಶುಶ್ರೂಷಾ ಪ್ರಕ್ರಿಯೆ ಮತ್ತು ತಡೆಗಟ್ಟುವ ಕ್ರಮದ ಮಸೂರದೊಳಗಿನಿಂದ ಆರೋಗ್ಯವನ್ನು ಅರ್ಥೈಸಿಕೊಳ್ಳಬಹುದು. ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸೆಗಳಂತಹ ಪ್ರಾಚೀನ ಔಷಧಿ ಶಿಸ್ತುಗಳಲ್ಲಿ ಅಡಗಿರುವ ಪ್ರಕಾಂಡ ಜ್ಞಾನದ ಆಧಾರದ ಮೇಲಿನ ಆರೋಗ್ಯದ ಬಗ್ಗೆ ಐತಿಹಾಸಿಕ ಪಾರಂಪರಿಕ ಮಾರ್ಗಗಳು. ಭಾರತದಲ್ಲಿ ಆರೋಗು ಮತ್ತು, ಸುಖೀಭಾವದ ಬಹುಮುಖ್ಯ ಭಾಗಗಳಾಗಿ ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಪದ್ಧತಿಗಳಿವೆ.
ಇನ್ನಷ್ಟು ತಿಳಿಯಿರಿ
ಒಳಗೊಳ್ಳುವಿಕೆಯ ಅಭಿವೃದ್ಧಿ
ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಆಧಾರದ ಮೇಲಲ್ಲದೆ, ಸಮಾಜದ ಪ್ರತಿಯೊಂದು ವಲಯಕ್ಕೂ ಪ್ರಯೋಜನವಾಗುವ ಹಾಗೆ ಎಲ್ಲರಿಗೂ ಒಳ್ಳೆಯ ಅವಕಾಶಗಳನ್ನು ಒಳಗೊಳ್ಳುವಿಕೆಯ ಅಭಿವೃದ್ಧಿಯು ಒದಗಿಸುತ್ತದೆ.
ಅತಿ ಅವಶ್ಯಕ ಸೇವೆಗಳಾದ ನೀರು, ನೈಮಲ್ಯ, ವಸತಿ, ವಿದ್ಯತ್ ಇತ್ಯಾದಿಗಳಿಗೆ ಉತ್ತಮಗೊಂಡ ನಿಲುಕು ಹಾಗೂ ಸೌಲಭ್ಯವಂಚಿತ ಜನರಿಗೆ ನಿಗದಿತ ಗುರಿಯುಳ್ಳ ಪ್ರಯತ್ನಗಳು ಇನ್ನೂ ಹೆಚ್ಚಿನ ಮಟ್ಟದ ಒಳಗೊಳ್ಳುವ ಭಾರತ ನಿರ್ಮಾಣದಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ.
ಇನ್ನಷ್ಟು ತಿಳಿಯಿರಿ
ಆತ್ಮ ನಿರ್ಭರ ಭಾರತ
ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಾಣುವ ನವಭಾರತದ ದರ್ಶನವಾಗಿದೆ ಆತ್ಮನಿರ್ಭರ ಭಾರತ ಅಭಿಯಾನ. ಆತ್ಮ ನಿರ್ಭರ ಅಭಿಯಾನಕ್ಕೆ ಚಾಲನೆ ಕೊಡುತ್ತ 12ನೇ ಮೇ 2020ರಂದು ಪ್ರಧಾನ ಮಂತ್ರಿಯವರು ಈ ಉದ್ಘೋಷವನ್ನು ಮಾಡಿದರು. ಕೋವಿಡ್-19 ಸಾಂಕ್ರಮಿಕ ರೋಗವನ್ನು ಭಾರತದಲ್ಲಿ ಪ್ರತಿರೋಧಿಸಲು ವಿಶೇಷ ಆರ್ಥಿಕ ಹಾಗೂ ಸಮೈಕಿಕ ನಿಧಿಯಾಗಿ ಭಾರತದ ಜಿಡಿಪಿಯ 10% ಮೊತ್ತವಾಗಿರುವ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್‌ನ್ನು ಅಂದು ಘೋಷಿಸಿದರು.
ಇನ್ನಷ್ಟು ತಿಳಿಯಿರಿ
ಸಾಂಸ್ಕೃತಿಕ ಹೆಮ್ಮೆ
ಭಾರತವು ಅನೇಕ ಸಂಸ್ಕೃತಿಗಳ ನಾಡು. ಪ್ರಪಂಚದ ಅತ್ಯಂತ ಪ್ರಾಚೀನ ನಾಗರೀಕತೆಗಳಲ್ಲಿ ಒಂದಾಗಿದೆ. ಇದರ ಪ್ರಾಚೀನತೆ 4000 ವರ್ಷಗಳ ಹಿಂದೆ ಸರಿಯುತ್ತದೆ. ಈ ಸಮಯದಲ್ಲಿ ಅನೇಕ ಪದ್ಧತಿಗಳು ಮತ್ತು ಸಂಪ್ರದಾಯಗಳು ಸಮ್ಮಿಳಿತವಾಗಿವೆ. ಇದು ದೇಶದ ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಗಳನ್ನು ಪ್ರತಿಬಿಂಬಿಸುತ್ತದೆ.
ಸಮೃದ್ಧ ಸಾಂಸ್ಕೃತಿಕ ಪರಂಪರೆಯಿಂದ ಅತ್ಯಂತ ರುಚಿಕರ ಖಾದ್ಯಗಳ ಮೂಲ ಸೃಷ್ಟಿಯವರೆಗೂ ಈ ದೇಶವು ಸೀಮಾತೀತವಾಗಿದೆ. ತಮ್ಮ ಸಾಂಸ್ಕೃತಿಕ ಹಿನ್ನೆಲೆಯ ಬಗ್ಗೆ ಈ ದೇಶದ ಜನರು ಹೆಮ್ಮೆ ಪಡುತ್ತಾರೆ ಹಾಗೂ ತಮ್ಮ ಪರಂಪರೆಗಳನ್ನು ಸತತವಾಗಿ ಮುಂದುವರೆಸುತ್ತಿದ್ದಾರೆ.
ಇನ್ನಷ್ಟು ತಿಳಿಯಿರಿ
ಒಗ್ಗಟ್ಟು
ವೈವಿಧ್ಯಮಯ ನಾಡು ನಮ್ಮ ಈ ಭಾರತ. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಅನೇಕ ಸಂಸ್ಕೃತಿಗಳು, ಆಚರಣೆಗಳು, ಭಾಷೆಗಳು, ಆಹಾರಗಳು, ವಸ್ತ್ರಗಳು, ಹಬ್ಬಗಳು ಮತ್ತಿತರ ವೈಶಿಷ್ಠಗಳನ್ನು ಪ್ರದರ್ಶಿಸುತ್ತದೆ ಭಾರತ. ಒಂದು ಸಮೈಕಿಕ ಶಕ್ತಿಯಾಗಿ ಮುನ್ನಡೆಯಬೇಕು ಎನ್ನುವ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದರ್ಶನವು ಆತ್ಮನಿರ್ಭರ ಭಾರತದ ಅಡಿಗಲ್ಲಾಗಿದೆ. ಅದರಿಂದಾಗಿಯೇ 2022ರ 76ನೇ ಸ್ವಾತಂತ್ರ್ಯ ದಿನದಂದು ಮಾನ್ಯ ಪ್ರಧಾನ ಮಂತ್ರಿಯವರು ಘೋಷಿಸಿದ ಪಂಚಪ್ರಾಣಗಳಲ್ಲಿ ʻಒಗ್ಗಟ್ಟುʼ ಒಂದಾಗಿದೆ. ಈ ಸಮಾನ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತಿಷ್ಠಿತ ಸ್ವಾತಂತ್ರ್ಯದ 100 ವರ್ಷಗಳತ್ತ ನಾವು ಒಟ್ಟಾಗಿ ಹೆಚ್ಚಿನ ಸಮೈಕಿಕ ದೇಶವಾಗಿ ಮುನ್ನಡೆಯೋಣ.
ಇನ್ನಷ್ಟು ತಿಳಿಯಿರಿ