ಪರಿಸರಕ್ಕಾಗಿ ಜೀವನಶೈಲಿ (LiFE) | ಶೀರ್ಷಿಕೆಗಳು 2.0 | ಆಜಾದಿ ಕ ಅಮೃತ್ ಮಹೋತ್ಸವ, ಭಾರತ ಸರ್ಕಾರ.

ಪರಿಸರಕ್ಕಾಗಿ ಜೀವನಶೈಲಿ (LiFE)

Lifestyle for Environment (LiFE)

ಪರಿಸರಕ್ಕಾಗಿ ಜೀವನಶೈಲಿ (LiFE)

UNFCCC COP26 (UN Climate Change Conference)ರಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು LiFE ನ್ನು (ಪರಿಸರಕ್ಕಾಗಿ ಜೀವನ ಶೈಲಿ) ಪರಿಚಯಿಸಿದರು. ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳನ್ನು ಪರಿಹರಿಸಲು ನಾಗರೀಕರನ್ನು ತೊಡಗಿಸಲು ಇದು ಆರಂಭವಾಗಿದೆ.

ಪ್ರಜ್ಞಾವಂತ ಮತ್ತು ಉದ್ದೇಶಪೂರ್ವಕವಾಗಿ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರ ಮೇಲೆ ನಮ್ಮ ಜೀವನ ಶೈಲಿಯನ್ನು ಈ ಆರಂಭಿಕೆಯು ಉತ್ತೇಜಿಸುತ್ತದೆ ಪ್ರಸಕ್ತದ ʻಉಪಯೋಗಿಸಿ ಬಿಸಾಡುʼ ಅಭ್ಯಾಸಗಳನ್ನು ಬದಲಿಸುವ ಗುರಿಯಿದೆ. ಇದರ ಹಿಂದಿನ ಉದ್ದೇಶವೇನೆಂದರೆ ಹವಾಮಾನ ಬದಲಾವಣೆಗಾಗಿ ದೈನಂದಿನ ಜೀವನದಲ್ಲಿ ಸರಳ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ನಾಗರೀಕರನ್ನು ಉತ್ತೇಜಿಸುವುದಾಗಿದೆ.

ಹವಾಮಾನ ಸ್ಥಿತಿಗತಿಯಲ್ಲಿ ಬದಲಾವಣೆ ತರುವುದಕ್ಕಾಗಿ ಸಾಮಾಜಿಕ ಜಾಲತಾಣ ಸಂಪರ್ಕಗಳ ಬಲವನ್ನು ಬಳಸುವುದು LiFE ಯೋಜನೆಯ ಇನ್ನೊಂದು ಭಾಗವಾಗಿದೆ. ಜಗತ್ತಿನಾದ್ಯಂತ ಪರಿಸರಾಸಕ್ತರ ಸೈನ್ಯವೊಂದನ್ನು ಕಟ್ಟುವ ಉದ್ದೇಶ ಈ ಯೋಜನೆಗಿದೆ. ಇವರನ್ನು ʻಭೂಮಿ ಪರಜನರುʼ ಎಂದು ಕರೆದು, ಅವರು ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮತ್ತು ಬೆಂಬಲಿಸಲು ಉತ್ತೇಜಿಸಲಾಗುತ್ತದೆ.

LiFE ನ ಮೂರು ಆಧಾರ ಸ್ತಂಭಗಳಡಿಯಲ್ಲಿ ವಿಂಗಡಿಸಲಾದ ಕ್ಷೇತ್ರಗಳು:

ವ್ಯಕ್ತಿಗತ ನಡಾವಳಿಕೆಯ ಮೇಲೆ ಗಮನ

ಪ್ಲಾಸ್ಟಿಕ್‌ನ ಒಂದು ಸಾರ್ತಿ ಬಳಕೆಯಿಂದಾಗುವ ಕೆಟ್ಟ ಪರಿಣಾಮಗಳ ಅರಿವು, ಸುಸ್ಥಿರ ಸಾರಿಗೆ ವಿಧಾನಗಳಿಂದ ಸೈಕಲ್‌, ಇ-ಬೈಕ್‌ಗಳು, ಇ-ಕಾರ್‌ಗಳ ಬಗ್ಗೆ ಅರಿವು, ನೀರುಪೋಲು ಮಾಡುವುದರ ಬಗ್ಗೆ ಪಜ್ಞೆ, ಪರಿಸರ ಸಂಬಂಧಿತ ಲೇಬಲ್‌ಗಳ ಜ್ಞಾನ (ಸಾವಯವ, ಪ್ಲಾಸ್ಟಿಕ್‌ ಮುಕ್ತ, ಹಾನಿಯಿಲ್ಲದ, ಶಕ್ತಿಯ ಸ್ಟಾರ್‌ ಲೇಬಲ್‌ಗಳು ಇತ್ಯಾದಿ), ಗ್ರಾಹಲ ಅಭ್ಯಾಸಗಳು ಮತ್ತು ಅವುಗಳನ್ನು ಹಸಿರುಮಯವಾಗಿಸುವುದು-ವ್ಯಕ್ತಿಗತ ಕಾರ್ಬನ್‌ ಪ್ರಿಂಟ್‌ನ್ನು ಮೌಲ್ಯಮಾಪನ ಮಾಡುವುದು ನೈಸರ್ಗಿಕ ಶಕ್ತಿಯನ್ನು ಬಳಸುವುದು (ಪವನಶಕ್ತಿ, ಸೌರಶಕ್ತಿ, ಜಲಶಕ್ತಿ) ಧಿರಿಸನ ಬಗ್ಗೆ ಪ್ರಜ್ಞಾಪೂರ್ವಕ ಅರಿವು (ಚಮ, ಕೂದಲು, ಪ್ರಾಣಿಜನ್ಯ ಉತ್ಪನ್ನ ಇತ್ಯಾದಿ).

ಜಾಗತಿಕ ಸಹ ಉತ್ಪಾದನೆ

ಜಗಾತಿಕ ಮಟ್ಟದಲ್ಲಿ ಬದಲಾವಣೆಗಾಗಿ ಬಳಸಬಹುದಾದ ವಿಚಾರಗಳು. ಉದಾ: ಇಂಗಾಲ ಮಾಲಿನ್ಯ ಕಾರ್ಖಾನೆಗಳ ಪ್ರತಿಕೂಲ ಪರಿಣಾಮಗಳ ಅರಿವು, ಅರಣ್ಯಸ್ನೇಹಿ ಬಂಡವಾಳ ಹೂಡಿಕೆಗಳ ಅರಿವು, ಸ್ಮಾರ್ಟ್‌ ಎನರ್ಜಿ ಬಳಕೆ ಇತ್ಯಾದಿ.

ಸ್ಥಳೀಯ ಸಂಸ್ಕೃತಿಗಳ ವರ್ಧನೆ

ಸಮುದಾಯ ಉದ್ಯಾನಗಳ ಬಗ್ಗೆ ಅರಿವು, ತ್ಯಾಜ್ಯದಿಂದ ಉತ್ಪನಗಳ ಜ್ಞಾನ, ಬಟ್ಟೆಯ ಮರು ಬಳಕೆಯ ಜ್ಞಾನ, ನಗರ ಕೃಷಿ (ಹೈಡ್ರೋಪೋನಿಕ್‌ ಕೃಷಿ)ಯ ಪ್ರಾಮುಖ್ಯತೆ, ಆಹಾರ ಪೋಲಿನ ಇಳಿಕೆ, ಸಮುದಾಯ ಬಲವರ್ಧನಾ ಚಟುವಟಿಕೆಗಳು, ವಿದ್ಯಾಸಂಸ್ಥೆಗಳಲ್ಲಿ ಪರಿಸರದ ಪಾಠಗಳ ಬೋಧನೆ, ಯುವಜನರನ್ನು ಒಳಗೊಳ್ಳುವುದು ಇತ್ಯಾದಿ.

read more

Top