ಬದಲಾವಣೆಯ ಕತೆಗಳು
ಭಾರತದ ಸ್ವತಂತ್ರಗಳಿಕೆಯ 75 ವಷಗಳ ಸ್ಮರರ್ಣಾರ್ಥವಾಗಿ ಆಜಾದಿ ಕಾ ಅಮೃತ ಮಹೋತ್ಸವವು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಗೌರವಿಸುತ್ತದೆ ಮತ್ತು ಉತ್ಸವಾಚರಣೆ ಮಾಡುತ್ತದೆ. ಭಾರತದ ಅದಮ್ಯ ಚೈತನ್ಯ ಮತ್ತು ಭರವಸೆಯುಕ್ತ ಭವಿಷ್ಯವನ್ನು ಸೆರೆಹಿಡಿಯಬಲ್ಲ ಪ್ರಕ್ರಿಯೆಗಳು ಮತ್ತು ಕಾರ್ಯಗಳ ಮೂಲಕ ಪ್ರಪಂಚದಾದ್ಯಂತದ ಜನರು ಈ ಚರಿತ್ರಾರ್ಹ ಮೈಲಿಗಲ್ಲನ್ನು ಆಚರಿಸುತ್ತಿದ್ದಾರೆ. ʻಬದಲಾವಣೆಯ ಕತೆಗಳುʼ ಶೀರ್ಷಿಕೆಯಲ್ಲಿ ಜನ ಭಾಗೀದಾರಿಯಂತಹ ಕತೆಗಳನ್ನು ಪ್ರಸ್ತುತ ಪಡಿಸಲಾಗುತ್ತಿದೆ. ನಮ್ಮ ದೇಶದ ಧೀರರನ್ನು ನೆನೆಸಿಕೊಳ್ಳುತ್ತ ಹೊಸ ಆತ್ಮನಿರ್ಭರ್ ಭಾರತದತ್ತ ದಾಪುಗಾಲು ಹಾಕಲು ನವ ತಲೆಮಾರುಗಳನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.