भारत सरकारGOVERNMENT OF INDIA
संस्कृति मंत्रालयMINISTRY OF CULTURE
ಭಾರತದ ಸ್ವಾತಂತ್ರ ಸಂಗ್ರಾಮದ ಸಮಯದಲ್ಲಿ ಅನೇಕ ಕವಿಗಳು ಮತ್ತು ಲೇಖಕರು ಕ್ರಾಂತಿಕಾರಿ ಸಾಹಿತ್ಯವನ್ನು ರಚಿಸಿದರು. ಅದನ್ನು ಬ್ರಿಟಿಷ ಸರಕಾರವು ಬಹಿಷ್ಕರಿಸಿತ್ತು. ಭಾರತದಲ್ಲಿ ಅವರ ಆಡಳಿತದ ಸುರಕ್ಷತೆಗೆ ಅಪಾಯಕಾರಿ ಎಂದು ಆ ಬರಹಗಳನ್ನು ಪರಿಗಣಿಸಿದ್ದರು. ಈ ಸಾಹಿತ್ಯವು ಜನರ ಮನದಲ್ಲಿ ದೇಶಭಕ್ತಿಯ ಭಾವನೆಗಳನ್ನು ಬಡಿದೇಳಿಸುವ ಹಾಗೂ ಭಾರತವನ್ನು ಮುಕ್ತಗೊಳಿಸುವತ್ತ ಅವರನ್ನು ಜಾಗರೂಕರನ್ನಾಗಿಸುವ ಗುರಿಯನ್ನೂ ಹೊಂದಿದ್ದವು.
ಜನರ ಹಾಗೂ ಸ್ವಾತಂತ್ರ್ಯ ಸೇನಾನಿಗಳ ಭಾವನೆಗಳು, ಆಶೋತ್ತರಗಳು ಮತ್ತು ದೃಢ ನಿಶ್ಚಯಗಳನ್ನು ಈ ಅನನ್ಯ ಸಂಕಲನಗಳು ಹೊಂದಿವೆ. ಭಾರತದ ವಿವಿಧ ಭಾಷೆಗಳಾದ ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮರಾಠಿ, ಒಡಿಯಾ, ಪಂಜಾಬಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಉಪಲಬ್ಧವಿವೆ.
ಈ ಭಾಗದಲ್ಲಿ ಕೆಲವು ಪ್ರಾತಿನಿಧಿಕ ಗೀತೆಗಳನ್ನು ಆಯ್ದ ಪ್ರಕಟಣೆಗಳಿಂದ ಆರಿಸಿ ಪ್ರಮುಖ ಗಾಯಕರುಗಳಿಂದ ಹಾಡಲಾದ ದೇಶಭಕ್ತಿ ಗೀತೆಗಳಿವೆ.