ಸ್ವಚ್ಛ ಗಂಗೆಯ ಬಗ್ಗೆ ರಾಷ್ಟ್ರೀಯ ಸಮಿತಿಯ ಪ್ರಕಾರವಾಗಿ ಪ್ರತಿ ವರ್ಷವು ಭಾರತಕ್ಕೆ 4000 ಬಿಲಿಯನ್ ಕ್ಯೂಬಿಕ್ ಮೀಟರ್‌ನಷ್ಟು ಮಳೆ ನೀರು ದೊರೆಯುತ್ತದೆ. ಆದರೆ ಈ ಮಳೆ ನೀರನ್ನು ಹಿಡಿದಿಡುವಲ್ಲಿ ಭಾರತ ಬಹಳ ಕೆಳಸ್ಥಾನದಲ್ಲಿದೆ. ವಾರ್ಷಿಕ ಮಳೆಯ ಕೇವಲ 8% ನೀರನ್ನು ಮಾತ್ರ ನಾವು ಸಂಗ್ರಹಿಸುತ್ತೇವೆ.1 ನೀರನ್ನು ಸಂರಕ್ಷಿಸುವಲ್ಲಿ ಇಂತಹ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು.
- ಪ್ರಾಚೀನ ಅಂತರ್ಜಲ ಬಳಕೆ ವಿಧಾನಗಳು: ಕುಂಡ್‌ಗಳು, ಜಾಲಾರಗಳು, ಬಾವ್‌ಡಿಗಳು, ಜೋಹಾದ್‌ಗಳು ಇತ್ಯಾದಿ ಪ್ರಾಚೀನ ನೀರಾವರಿ ಪದ್ಧತಿಗಳ ಬಗ್ಗೆ ಅರಿವು.
- ಅಂತರ್ಜಲ ಸಂರಕ್ಷಣೆ: ನೀರಿನ ವ್ಯರ್ಥದ ಬಗ್ಗೆ ಅರಿವು, ಬಳಸಿದ ನೀರಿನ ಪುರ್ನಬಳಕೆ, ಅಂತರ್ಜಲ ಮರುಪೂರಣ, ವ್ಯರ್ಥವಾದ ನೀರಿನ ಪುರ್ನಬಳಕೆ ಕೊಳದ ನೀರನ್ನು ಬಳಸಿ ಬರಗಾಲ ವರ್ಷಗಳಲ್ಲಿ ಬೆಳೆಗಳನ್ನು ಉಳಿಸಿಕೊಳ್ಳುವ ವಿಧಾನಗಳ ಅರಿವು, ಪಾನಿ ಪಂಚಾಯತ್‌ನಂತಹ ನೀರಿನ ಸಮಿತಿಗಳ ರಚನೆಯಿಂದಾಗುವ ಪ್ರಯೋಜನಗಳು, ಪ್ರಾಯೋಗಿಕ ಕಲಿಕಾ ವಿಧಾನಗಳಿಂದ ಮತ್ತು ಆಟಗಳ ಮೂಲಕ ನೀರಿನ ಸಂರಕ್ಷಣೆಯ ಕಲಿಕೆ, ಗ್ರಾಮೀಣ ಮಳೆ ಕೇಂದ್ರಗಳು, ಮಳೆ ನೀರಿನ ಸಂಗ್ರಹ ಆಗರಗಳು (ಮೀನು ಭತ್ತದ ಗದ್ದೆಯಲ್ಲಿ), ರೈತರ ನಡುವೆ ಅಂತರ್ಜಲ ಹಂಚಿಕೊಳ್ಳುವ ಬಗ್ಗೆ, ಇಳಿಜಾರುಗಳಲ್ಲಿ ಕೃಷಿಗಾಗಿ ನೀರಿನ ಸಂಗ್ರಹ, ನದಿ ಪಾತ್ರದ ನಿರ್ವಹಣಾ ತಂತ್ರಗಳು ಇತ್ಯಾದಿ.
- ಸ್ವಚ್ಛತೆ ಮತ್ತು ನೈರ್ಮಲ್ಯ: ಸುರಕ್ಷಿತ ಕುಡಿಯುವ ನೀರು, ನೈರ್ಮಲ್ಯವಿಲ್ಲದರ ಪ್ರತಿಕೂಲ ಪರಿಣಾಮಗಳು (ನೀರಿನ ಮೂಲಕ ಹರಡುವ ರೋಗಗಳು), ನೀರಿನ ಗುಣಮಟ್ಟ ಮತ್ತು ಸ್ವಚ್ಛತೆಯ ನಡುವಿನ ಸಂಬಂಧದ ಜ್ಞಾನ, ನೀರು ಕಟ್ಟಿಕೊಳ್ಳುವಿಕೆ ಮತ್ತು ನೀರಿನ ಗುಣದ ಮೇಲೆ ಅದರ ಪರಿಣಾಮದ ಅರಿವು ಇತ್ಯಾದಿ.
Status and importance of traditional water conservation system in present scenario, Central Soil and Materials Research Station, New Delhi, National Mission for Clean Ganga (NMCG) (2019)
ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ 24-4-2022ರಂದು ಮಾನ್ಯ ಪ್ರಧಾನ ಮಂತ್ರಿಯವರು ಅಮೃತ್ ಸರೋವರ್ ಎಂಬ ಕಾರ್ಯಯೋಜನೆಯನ್ನು ಆರಂಭಿಸಿದರು. ನೀರಿನ ಸಂರಕ್ಷಣೆಗಾಗಿ ಇದು ಆರಂಭವಾಗಿದೆ. ನಮ್ಮ ದೇಶದ ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ 75 ನೀರಿನ ಸಂಗ್ರಹಗಳ ಪುನರುಜ್ಜೀವನ ಮಾಡಿ ಅಭಿವೃದ್ಧಿಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಅಮೃತ್ ಸರೋವರ್‌ನ ಉಪಯೋಗಗಳು: ಜಿಲ್ಲೆಯಲ್ಲಿ ನೀರಿನ ಮೂಲಗಳನ್ನು ಕಟ್ಟುವ ಉಪಯೋಗಗಳು, ನದಿಹರಿವನ್ನು ನಿಯಂತ್ರಿಸುವುದರ ಅರಿವು, ಸರೋವರ ಪರಿಸರದ ಅರಿವು, ಜಲಾಂತರ ಮತ್ತು ಅದೆ ಜಲಾಂತರ ಸಸ್ಯಗಳು ಮತ್ತು ಪ್ರಾಣಿಗಳು. ಪ್ರವಾಹಗಳು ಮತ್ತು ಬರಗಳ ಪರಿಣಾಮಗಳ ಬಗ್ಗೆ ಅರಿವು ಅಂತರ್ಜಲ ಮರುಪೂರಣದ ವಿಧಾನಗಳು ಇತ್ಯಾದಿ
- ಅಮೃತ್ ಸರೋವರದಿಂದ ಸಿಗುವ ಆರಂಭಿಕೆಯ ಸಾಧ್ಯತೆಗಳು: ಜಿಲ್ಲೆಯಲ್ಲಿನ ಇನ್ನಿತರ ಜಲಮೂಲಗಳ ಪುನರುತ್ಥಾನ, ಪರಿಸರದಲ್ಲಿನ ಮತ್ತು ಜಲಾಂತರ (ಅಸ್ತಿತ್ವದಲ್ಲಿರುವ) ಜೀವರಾಶಿಗಳ ಬಗ್ಗೆ ಮರುಸ್ಥಾಪನೆ, ನೀರಿನಾಧಾರಿತ ಆದಾಯದ ಹೆಚ್ಚಳ, ನೀರಿನ ಮೂಲಗಳ ಸ್ಚಚ್ಛತೆ ಹಾಗೂ ವರ್ಧಿತ ಸಂರಕ್ಷಣೆ, ಇತ್ಯಾದಿ.