ಒಳಗೊಳ್ಳುವಿಕೆಯ ಅಭಿವೃದ್ಧಿ | ಶೀರ್ಷಿಕೆಗಳು 2.0 | ಆಜಾದಿ ಕ ಅಮೃತ್ ಮಹೋತ್ಸವ, ಭಾರತ ಸರ್ಕಾರ.

ಒಳಗೊಳ್ಳುವಿಕೆಯ ಅಭಿವೃದ್ಧಿ

Inclusive Development

ಒಳಗೊಳ್ಳುವಿಕೆಯ ಅಭಿವೃದ್ಧಿ

ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಆಧಾರದ ಮೇಲಲ್ಲದೆ, ಸಮಾಜದ ಪ್ರತಿಯೊಂದು ವಲಯಕ್ಕೂ ಪ್ರಯೋಜನವಾಗುವ ಹಾಗೆ ಎಲ್ಲರಿಗೂ ಒಳ್ಳೆಯ ಅವಕಾಶಗಳನ್ನು ಒಳಗೊಳ್ಳುವಿಕೆಯ ಅಭಿವೃದ್ಧಿಯು ಒದಗಿಸುತ್ತದೆ.

ಅತಿ ಅವಶ್ಯಕ ಸೇವೆಗಳಾದ ನೀರು, ನೈಮಲ್ಯ, ವಸತಿ, ವಿದ್ಯತ್‌ ಇತ್ಯಾದಿಗಳಿಗೆ ಉತ್ತಮಗೊಂಡ ನಿಲುಕು ಹಾಗೂ ಸೌಲಭ್ಯವಂಚಿತ ಜನರಿಗೆ ನಿಗದಿತ ಗುರಿಯುಳ್ಳ ಪ್ರಯತ್ನಗಳು ಇನ್ನೂ ಹೆಚ್ಚಿನ ಮಟ್ಟದ ಒಳಗೊಳ್ಳುವ ಭಾರತ ನಿರ್ಮಾಣದಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ.

ಒಳಗೊಳ್ಳುವಿಕೆಯ ಅಭಿವೃದ್ಧಿಗಾಗಿ ಗುರುತಿಸಲಾದ ಕ್ಷೇತ್ರಗಳು

  • ಆದಿವಾಸಿ ಮತ್ತು ಗ್ರಾಮೀಣ ಸಮುದಾಯಗಳು: ಆದಿವಾಸಿ ಜೀವನಶೈಲಿಯ ಸಮಾಜೋ-ಸಾಂಸ್ಕೃತಿಕ ಆಯಾಮಗಳ ಬಗ್ಗೆ, ಸಮಾಜದಲ್ಲಿ ಈ ಸಮುದಾಯಗಳ ಮಿಳಿತಗೊಳ್ಳುವಿಕೆ, ತಳಮಟ್ಟದಲ್ಲಿನ ಸಮುದಾಯಗಳಿಗೆ ಶಿಕ್ಷಣ ಕೊಡುವುದರ ಬಗ್ಗೆ, ಮೂಲ ಅವಶ್ಯಕತೆಗಳಾದ ಶುದ್ಧನೀರು, ಆಹಾರ ಸೌಲಭ್ಯಗಳು, ನೈರ್ಮಲ್ಯ, ವಿದ್ಯುತ್‌, ಸಂಪರ್ಕಜಾಲಗಳು ಒದಗುವಿಕೆ, ಸರಿಯಾದ ರಸ್ತೆಗಳ ಮೂಲಕ ಸಂಪರ್ಕ, ಕಟ್ಟಿದ ಮನೆಗಳು, ಸ್ವಸಾಮರ್ಥ್ಯ ಸಾಧಿಸಲು ಮತ್ತು ಅವರ ಕ್ಷಮತೆ ಗರಿಷ್ಠಗೊಳಿಸಲು ಗ್ರಾಮೀಣ ಸಮುದಾಯಗಳಿಗೆ ಬೆಂಬಲ ಇತ್ಯಾದಿ.
  • ಭೌತಿಕವಾಗಿ ಊನವಾದವರು:   ತಳ್ಳುವ ಕುರ್ಚಿಗಳು ಮತ್ತು ದೃಶ್ಯಶ್ರಾವ್ಯ ಸಾಧನಗಳಂತಹ ಅನುಕೂಲಗಳನ್ನು ಕೊಡುವುದು, ಸುಲಭ ಚಲನೆಗೆ rampಗಳು ಮತ್ತು ಅಡೆರಹಿತ ಹಾದಿಗಳನ್ನು ಸ್ಥಾಪಿಸುವುದು, ಸಮಾಜದಲ್ಲಿ ವಿಭಿನ್ನ ಕ್ಷಮತೆಯುಳ್ಳವರನ್ನು ಮಿಳಿತಗೊಳ್ಳುವ ಬಗೆಗಿನ ಅರಿವು,ವಿಭಿನ್ನ ಕ್ಷಮತೆಯುಳ್ಳವರೊಡನೆ ವ್ಯವಹರಿಸಲು ವ್ಯಕ್ತಿಗಳಿಗೆ ಹಾಗೂ ವೃತ್ತಿಪರರಿಗೆ ಪ್ರಶಿಕ್ಷಣ ಕೊಡುವುದು, ವಿಶೇಷ ಕ್ಷಮತೆಯವರಿಗೆ ಕೌಶಲ್ಯತರಭೇತಿ ನೀಡುವುದು, ಸಂಜ್ಞಾ ಭಾಷೆಯ ತರಬೇತಿ ಇತ್ಯಾದಿ.
  • ಬ್ಯಾಂಕಿಂಗ್‌ ಇಲ್ಲದ ಕ್ಷೇತ್ರ: ಗ್ರಾಮೀಣ ಮತ್ತು ಆದಿವಾಸಿ ಪ್ರದೇಶಗಳಲ್ಲಿ ಬ್ಯಾಂಕ್‌ ಖಾತೆಗಳ ಮಹತ್ವದ ಬಗ್ಗೆ ಅರಿವು.
  • ಮಹಿಳೆಯರು: ಬಸುರಿ ಭಾಣಂತಿಯರ ಆರೈಕೆ, ಆರೋಗ್ಯ ರಕ್ಷಣೆ, ಶಿಕ್ಷಣ, ಮಕ್ಕಳ ಪಾಲನೆ, ಕೌಶಲ್ಯವೃದ್ಧಿ, ಆರ್ಥಿಕತೆ ಉತ್ತಮಗೊಳಿಸುವಿಕೆಯ ಅವಕಾಸಗಳು ಇತ್ಯಾದಿ.
  • ಇತರೆ: ಒಳಗೊಳ್ಳುವಿಕೆಯ ಪ್ರಚಾರಗಳ ಮೂಲಕ ಪ್ರಯೋಜನ ಪಡೆಯಬಲ್ಲ ಇನ್ನಿತರ ಸಮುದಾಯಗಳು

ಕ್ಷಮತೆಯುಳ್ಳ ಕ್ಷೇತ್ರಗಳು

  • ಆರ್ಥಿಕತೆ ಉತ್ತಮಗೊಳಿಸುವಿಕೆ ಮತ್ತು ಕೌಶಲ್ಯವೃದ್ಧಿ: ಅಂಚಿನಲ್ಲಿರುವ ಸಮುದಾಯಗಳ ಸದಸ್ಯರುಗಳಿಗಾಗಿಉ ಅವಕಾಶಗಳ ಹೆಚ್ಚಿಸುವಿಕೆ, ಕೌಶಲ್ಯ ಅಭಿವೃದ್ಧಿ (ಉದಾ: ಸ್ಥಳೀಯ ಮತ್ತು ಪ್ರಾಂತೀಯ ಕಲಾ ಪ್ರಕಾರಗಳು, ಕೃಷಿ, ಡೈರಿ ಮಾಡುವುದು), ಹೊಸ ಬ್ಯುಸಿನೆಸ್‌ ಮತ್ತು ಸ್ವಸಹಾಯ ಗುಂಪುಗಳ ಬಗ್ಗೆ ಹೆಚ್ಚಿನ ಅರಿವು, ಬ್ಯಾಂಕ್‌ಗಳು, ಆರ್ಥಿಕ ಜ್ಞಾನ ಮತ್ತು ಶಿಕ್ಷಣಗಳಿಗಾಗಿ ಸುಲಭ ಲಭ್ಯತೆ.
  • ಶಿಕ್ಷಣ: ದೂರದ ಆದಿವಾಸಿ ಪ್ರದೇಶಗಳಲ್ಲಿ ಶಿಬಿರಗಳನ್ನು ಸ್ಥಾಪಿಸುವುದು, ಹಿಂದುಳಿದ ಪ್ರದೇಶಗಳಲ್ಲಿ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳ ವಿತರಣೆ, ಪ್ರಾಥಮಿಕ ಮತ್ತು ಪ್ರೌಢ ಹಂತಗಳಲ್ಲಿ ಸಮ್ಮೇಳನಗಳು ಮತ್ತು ಕಾರ್ಯಾಗಾರಗಳನ್ನು ಸಂಘಟಿಸುವುದು, ಆದಿವಾಸಿ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿ ಮಾತೃಭಾಷೆಗಳಿಗೆ ಬೋಧಿಸಲು ಶಿಕ್ಷಕರಿಗೆ ಮತ್ತು ವೃತ್ತಿಪರರಿಗೆ ತರಬೇತಿ ನೀಡುವುದು ಇತ್ಯಾದಿ.
  • ಆರೋಗ್ಯ ಕಾಳಜಿ ಮತ್ತು ನೈರ್ಮಲ್ಯ: ಆರೋಗ್ಯ ಕಾಳಜಿ ಸೇವೆಗಳನ್ನು ಹೆಚ್ಚಿಸುವುದು, ವ್ಯಕ್ತಿಗತ ನೈರ್ಮಲ್ಯದ ಅರಿವು, ಪ್ರಥಮ ಚಿಕಿತ್ಸೆಯ ಅವಶ್ಯಕ ಜ್ಞಾನ, ಮುಟ್ಟಾಗುವಿಕೆಯ ಆರೈಕೆ, ಸಂತಾನೋತ್ಪತ್ತಿಯ ಆರೋಗ್ಯ, ಚುಚ್ಚು ಮದ್ದು, ಆರೋಗ್ಯಕರ ಜೀವನಶೈಲಿಯ ಅರಿವು, ಕಸದ ಸರಿಯಾದ ನಿರ್ವಹಣೆ ಇತ್ಯಾದಿ.
  • ಮಗುವಿನ ಆರೈಕೆ: ಕಲಿಯಲು ಸಮಾನ ಅವಕಾಶಗಳು, ಸಾಮಾಜಿಕ ಕೌಶಲ್ಯಗಳನ್ನು ಪಾಲಿಸುವ ಅವಕಾಶಗಳು, ಸ್ಪಂದನ ಗೋಷ್ಠಿ/ಶಿಬಿರಗಳು, ವಿಕಲಾಂಗ ಮಕ್ಕಳಿಗಾಗಿ ವಿಶೇಷ ಶಾಲಾ ಶಿಕ್ಷಣ, ಸಮಾನತೆ ಮತ್ತು ವೈವಿಧ್ಯತೆಯ ಬಗ್ಗೆ ಅರಿವು, ಮಕ್ಕಳಿಗೆ ರೋಗ ನಿರೋಧಕ ಶಕ್ತಿ ವೃದ್ಧಿ ಇತ್ಯಾದಿ.
  • ಗ್ರಾಮೀಣ ಮತ್ತು ಆದಿವಾಸಿ ಪ್ರದೇಶಗಳ್ಲಲಿ ಮೂಲ ಸೌಕಯ ಅಭಿವೃದ್ಧಿ: ವಸತಿ, ರಸ್ತೆಗಳು, ವಿದ್ದುದೀಕರಣ, ನೀರು ಸರಬರಾಜು, ಕೊಳೆನೀರಿನ ನಿರ್ವಹಣೆ ಇತ್ಯಾದಿ
  • ಕಾನೂನು ಹಕ್ಕುಗಳು ಮತ್ತು ಸರ್ಕಾರಿ ಯಫಜನೆಗಳ ಬಗ್ಗೆ ಅರಿವು: ಸಮಾನ ವೇತನದ ಬಗ್ಗೆ ಅರಿವು, ಕೆಲಸದ ಅವಧಿಗಳು, ಕೆಲಸದ ಜಾಗದಲ್ಲಿ ವರ್ತನೆ, ಮದುವೆಯ ಕಾನೂನುಬದ್ಧ ವಯಸ್ಸು, ಸರಕಾರಿ ಯೋಜನೆಗಳಾದ ಅಂತ್ಯೋದಯ ಅನ್ನ ಯೋಜನೆ (AAY), ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿಯೋಜನೆ (PMEGP), ಪ್ರಧಾನ ಮಂತ್ರಿ ರೋಜಗಾರ್‌ ಪ್ರೋತ್ಸಾಹನ್‌ ಯೋಜನೆ, ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನ‌ (DDU GKY), ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀನವ ನಿರ್ವಹಣೆ ಮಿಷನ್‌ (DAY-NULM), ನೇರ ಪ್ರಯೋಜನ ವರ್ಗಾವಣೆ ಇತ್ಯಾದಿ.
  • ಉದ್ದಿಮೆ ಪ್ರಶಿಕ್ಷಣ: ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ಅರಿವು ಹೆಚ್ಚಿಸುವ ಮೂಲಕ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಅರಿವು, ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯ ಗಳಿಸಲು ಸುರಕ್ಷಿತ ಅವಕಾಶಗಳು ಇತ್ಯಾದಿ.
  • ಇತರೆ: ಒಳಗೊಳ್ಳುವಿಕೆಯ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ವೃದ್ಧಿಸುವ ಇತರೆ ಕ್ಷೇತ್ರಗಳು ಮತ್ತು ವಲಯಗಳು
read more

Top