ಆತ್ಮ ನಿರ್ಭರ ಭಾರತ
ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಾಣುವ ನವಭಾರತದ ದರ್ಶನವಾಗಿದೆ ಆತ್ಮನಿರ್ಭರ ಭಾರತ ಅಭಿಯಾನ. ಆತ್ಮ ನಿರ್ಭರ ಅಭಿಯಾನಕ್ಕೆ ಚಾಲನೆ ಕೊಡುತ್ತ 12ನೇ ಮೇ 2020ರಂದು ಪ್ರಧಾನ ಮಂತ್ರಿಯವರು ಈ ಉದ್ಘೋಷವನ್ನು ಮಾಡಿದರು. ಕೋವಿಡ್-19 ಸಾಂಕ್ರಮಿಕ ರೋಗವನ್ನು ಭಾರತದಲ್ಲಿ ಪ್ರತಿರೋಧಿಸಲು ವಿಶೇಷ ಆರ್ಥಿಕ ಹಾಗೂ ಸಮೈಕಿಕ ನಿಧಿಯಾಗಿ ಭಾರತದ ಜಿಡಿಪಿಯ 10% ಮೊತ್ತವಾಗಿರುವ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್‌ನ್ನು ಅಂದು ಘೋಷಿಸಿದರು.
ದೇಶ ಹಾಗೂ ಇದರ ನಾಗರೀಕರನ್ನು ಸ್ವತಂತ್ರರಾಗಿಸಿ ಹಾಗೂ ಎಲ್ಲಾ ವಿಷಯಗಳಲ್ಲಿಯೂ ಆತ್ಮ ನಿರ್ಭರರಾಗುವಂತೆ ಮಾಡುವುದು ಇದರ ಗುರಿಯಾಗಿದೆ. ಈ ಆತ್ಮ ನಿರ್ಭರ ಭಾರತಕ್ಕೆ ಆಧಾರ ಸ್ತಂಭಗಳನ್ನು ಅವರು ವಿವರಿಸಿದರು: ಆರ್ಥಿಕತೆ, ಮೂಲಭೂತ ಸೌಕಯ ವ್ಯವಸ್ತೇ, ಚಲನಶೀಲ ಜನತೆ ಮತ್ತು ಬೇಡಿಕೆ. ಆತ್ಮ ನಿರ್ಭರ ಭಾರತ ಅಭಿಯಾನದಡಿಯಲ್ಲಿನ ಏಳು ಕ್ಷೇತ್ರಗಳ ಸರ್ಕಾರಿ ವರ್ಧನೆ ಹಾಗೂ ಸುಧಾರಣೆಗಳನ್ನು ಆರ್ಥಿಕ ಮಂತ್ರಿಗಳು ಪ್ರಕಟಿಸಿದರು.
ಕೃಷಿಗಾಗಿ ಪೂರಕ ಸರಪಳಿ ಸುಧಾರಣೆಗಳು, ಸಮಂಜಸ ತೆರಿಗೆ ವ್ಯವಸ್ಥೆಗಳು, ಸರಳ ಹಾಗೂ ಸ್ಪಷ್ಟ ಕಾನೂನುಗಳು, ಆತ್ಮ ನಿರ್ಭರ ಭಾರತದ ಗುರಿಗಳಿಗಾಗಿ ಸಕ್ಷಮ ಮಾನವ ಸಂಪನ್ಮೂಲ ಮತ್ತು ಸಶಕ್ತ ಆರ್ಥಿಕ ವ್ಯವಸ್ಥೆ ಬಗ್ಗೆ ಸುಧಾರಣೆಗಳನ್ನು ಸರಕಾರವು ಆರಂಭಿಸಿತು.
ಆತ್ಮ ನಿರ್ಭರತೆಗಾಗಿ ಭಾರತಕ್ಕೆ ಸಹಾಯವಾಗುವ ಕ್ಷೇತ್ರಗಳು
- ಆರ್ಥಿಕತೆ: ದೊಡ್ಡ ಜಿಗಿತ, ಸಣ್ಣ ಕಂತುಗಳ ರೂಪದ ಬದಲಾವಣೆಗಳಲ್ಲ
- ಮೂಲಭೂತ ವ್ಯವಸ್ಥೆ: ಆಧುನಿಕ ಭಾರತವನ್ನು ಪ್ರತಿನಿಧಿಸುವ ಹಾಗೆ
- ವ್ಯವಸ್ಥೆ: ತಾಂತ್ರಿಕತೆ ಆಧಾರಿತ ವ್ಯವಸ್ಥೆಗಳು
- ಚಲನಶೀಲ ಜನತೆ: ಅತಿ ದೊಡ್ಡ ಪ್ರಜಾ ಪ್ರಭುತ್ವ ಮತ್ತು ಅದರ ಚಲನಶೀಲ ಜನತೆ
- ಬೇಡಿಕೆ: ಬೇಡಿಕೆ ಮತ್ತು ಸರಬರಾಜು ಬಲದ ಪೂಣ ಬಳಕೆ.
ಆತ್ಮ ನಿರ್ಭರ ಭಾರತವನ್ನು ಹೇಗೆ ದರ್ಶಿಸಬಹುದು
- ಮೂಲಭೂತ ವ್ಯವಸ್ಥೆ: ಭಾರತದಲ್ಲಿನ ಮೂಲಭೂತ ವ್ಯವಸ್ಥೆಯಲ್ಲಿನ ಮೈಲಿಗಲ್ಲುಗಳು ಮತ್ತು ಪ್ರಗತಿಯನ್ನು ಮತ್ತು ಅದು ಹೇಗೆ ಪ್ರಗತಿ ಮತ್ತು ಆತ್ಮ ನಿರ್ಭರತೆಯನ್ನು ಸಶಕ್ತವಾಗಿಸುತ್ತಿದೆ ಎನ್ನುವುದುನ್ನು ಆಚರಿಸುವುದು.
- ಆತಿನಿರ್ಭರತೆಯನ್ನು ಸಶಕ್ತಗೊಳಿಸುವಲ್ಲಿ ಡಿಜಿಟಲ್ ಪ್ರವೇಶಾತಿ: ಪಾವತಿಯ ಅನ್ವಯಿಕೆಗಳು, ಆಹಾರ ಕೋರಿಕೆಗಳು, ದಿನಸಿ ಕೊಳ್ಳುವುದು, ಸುದೂರ ಔಷಧಿ ಕೊಳ್ಳುವಿಕೆ, ದೂರ ಕಾನೂನು ಸೇವೆ ಇತ್ಯಾದಿ-ಆತ್ಮ ನಿರ್ಭರತೆಯನ್ನು ಹೇಗೆ ಡಿಜಿಟಲ್ ಪ್ರವೇಶಾತಿ ಸಶಕ್ತ ಗೊಳಿಸುತ್ತಿದೆ ಎನ್ನುವುದರ ಮೇಲೆ ಕೇಂದ್ರೀಕರಣ.
- ಯುವಜನ ಹಾಗೂ ಉದ್ದಿಮೆ, ಆರಂಭಿಕೆ: ಉದ್ದಿಮೆ ಮನೋಭಾವ ಬೆಳೆಸಬಲ್ಲ ಕಾಯಯೋಜನೆಗಳು, ತಂಡ ಆಧಾರಿತ ಕಲಿಯುವಿಕೆ ಮತ್ತು ಮಾರ್ಗದರ್ಶನದ ಅವಕಾಶಗಳು, ಸ್ಪರ್ಧೆಗಳು ಮತ್ತು ವೇದಿಕೆಗಳು ಇತ್ಯಾದಿ, ಜಾಗತಿಕ ಬೆಳವಣಿಗೆ ಮತ್ತು ಪ್ರಗತಿಗೆ ಕೊಡುಗೆ ನೀಡಬಲ್ಲ ಭಾರತದ ವಿನೂತನ ಆರಂಭಿಕೆಗಳು.
- ಕ್ಷೇತ್ರವಾರು ಸುಧಾರಣೆಗಳು ಮತ್ತು ಆತ್ಮ ನಿರ್ಭರತೆ: ಕ್ಷೇತ್ರವಾರು ಸುಧಾರಣೆಗಳ ಮೂಲಕ ಮೌಲ್ಯ ವರ್ಧನೆ, ಪರಿಣಾಮದ ಮೌಲ್ಯಮಾಪನಗಳು, ಬದಲಾವಣೆ ಮತ್ತು ಸುಧಾರಣೆಗಳಿಗಾಗಿ ಆಂದೋಲನಗಳು, ಸುಲಭ ವ್ಯವಹಾರ ರೀತಿ ಇತ್ಯಾದಿ.
- ಸಕ್ಷಮ ಮಾನವ ಸಂಪನ್ಮೂಲ: ಕೌಶಲ್ಯ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲದ ಪ್ರಶಿಕ್ಷಣ. ಹೊಸ ಉದ್ಯೋಗ ಆಯ್ಕೆಗಳು ಮತ್ತು ಅವಕಾಶಗಳು.
- ಸಶಕ್ತ ಆರ್ಥಿಕ ವ್ಯವಸ್ಥೆ: ಆಟಗಳ ಮೂಲಕ ಮಕ್ಕಳಿಗೆ ಹಣಕಾಸು ವ್ಯವಹಾರವನ್ನು ಕಲಿಸುವುದು, ಮಹಿಳೆಯರಿಗಾಗಿ ಹಣಯೋಜನೆಗಳ ನಿರ್ವಹಣೆ, ಗ್ರಾಮೀನ ಗುರಿಯ ಗುಂಪುಗಳು ಮತ್ತಿತರರು, ತಾಂತ್ರಿಕತೆ ಮತ್ತು ಸೈಬರ್ ಸೆಕ್ಯೂರಿಟಿ ಶಿಬಿರಗಳು ಮತ್ತು ತಲುಪುವಿಕೆ.
- Vocal4Local: ಆಮದು ಇಳಿಕೆ, ಹೆಚ್ಚಿದ ರಫ್ತು, ವೋಕಲ್ ಫಾರ್ ಲೋಕಲ್‌ಗಾಗಿನ ಬೆಂಬಲ ನೀಡುವ ಬೇರು ಮಟ್ಟದ ಪ್ರಚಾರಗಳು, ಆತ್ಮ ನಿರ್ಭರತೆಗಾಗಿ ಸ್ಥಳೀಯ ಆರಂಭಿಕೆಗಳನ್ನು ಬಿಂಬಿಸುವ ಗ್ರಾಮೀಣ ಯೋಜನೆಗಳು.
- ಆತ್ಮ ನಿರ್ಭರತೆಯನ್ನು ವರ್ಧಿಸಬಲ್ಲ ಸಹಯೋಗಿ ಅಭ್ಯಾಸಗಳು: ಸಂಪನ್ಮೂಲಗಳು ಮತ್ತು ಉತ್ಪನ್ನಗಳ ಹೆಚ್ಚಿನ ದಕ್ಷತೆಗಳನ್ನು ಸಾಧಿಸಬಲ್ಲ ಸಂಸ್ಥೆಗಳು, ಉದ್ಯೋಗಗಳು ಮತ್ತು ಕ್ಷೇತ್ರಗಳ ನಡುವಿನ ಗೋಡೆಗಳನ್ನು ಕೆಡವಬಲ್ಲ ಕಾರ್ಯಕ್ರಮಗಳು ಹಾಗೂ ಆರಂಭಿಕೆಗಳು.
- ಜಾಗತಿಕ ಉತ್ಪಾದಕ ಕೇಂದ್ರವಾಗಿ ಭಾರತ: ಈ ವಿಷಯದ ಬಗೆಗಿನ ಆಂದೋಲನಗಳು, ಸಾಧನೆಗಳನ್ನು ಬಿಂಬಿಸುವುದು (ಉದಾ: ಭಾರತದ i phoneಗಳು)
- ಭಾರತ-ಒಂದು ಸಹಾಯಹಸ್ತ: ವಸುದೈವ ಕುಟುಂಬಕಂ ಭಾವನೆಯಿಂದ ಚಾಲಿತವಾದದ್ದು i.e., ಬೇರೆ ದೇಶಗಳಿಗೆ ನೆರವು ನೀಡುವಲ್ಲಿ ಬಿಂಬಿಸಬಲ್ಲ ಪ್ರಪಂಚವು ನನ್ನ ಕುಟುಂಬ ಆಂದೋಲನ.
read more