ರಂಗೋಲಿ ಹಾಕುವ ಸ್ಪರ್ಧೆ
ವಿವಿಧ ವಿಷಯಗಳ ಮೇಲೆ ವಿವಿಧ ಹೆಸರುಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ರಂಗೋಲಿಯನ್ನು ಬಿಡಿಸಲಾಗುತ್ತದೆ. ತಮಿಳು ನಾಡಿನ ಕೊಲ್ಲಮ್, ಗುಜರಾತಿನ ಸತಿಯೂ, ಬೆಂಗಾಲಿನ ಅಲ್ಪನಾ, ರಾಜಸ್ಥಾನದ ಮಂದನ, ಒಡಿಸ್ಸಾದ ಬಸ, ಉತ್ತರಾಖಾಂಡ್‌ನ ಐಪಾನ್, ಮಹಾರಾಷ್ಟ್ರದ ರಂಗೋಲಿ-ತಮ್ಮತಮ್ಮ ಪ್ರದೇಶದ ಸಂಪ್ರದಾಯಗಳು, ಜನಪದ ಮತ್ತು ಆಚರಣೆಗಳನ್ನು ಪ್ರತಿನಿಧಿಸುವ ಅನನ್ಯವಾದ, ಸ್ವಂತಿಕೆಯುಳ್ಳ ಮಾರ್ಗಗಳನ್ನು ಪ್ರತಿಯೊಂದು ಪ್ರದೇಶವೂ ಹೊಂದಿದೆ. ಈ ರಂಗೋಲಿ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ನಿಮ್ಮ ಸೃಜನಾತ್ಮಕ ಕೌಶಲ್ಯವನ್ನು ಪ್ರದರ್ಶಿಸುವ ಅವಕಾಶ ಇದೀಗ ನಿಮ್ಮದಾಗಿದೆ. 10 ವರ್ಷಗಳ ಮೇಲ್ಪಟ್ಟವರೆಲ್ಲರೂ ಈ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.